ಶೀಲ ಕಳೆದುಕೊಂಡ ಸಹೋದರಿಯರಿಬ್ಬರು ಆತ್ಮಹತ್ಯೆಗೆ ಶರಣು

ಕೋಲ್ಕತ್ತಾ| pavithra| Last Modified ಗುರುವಾರ, 10 ಸೆಪ್ಟಂಬರ್ 2020 (09:05 IST)
ಕೋಲ್ಕತ್ತಾ : ಅತ್ಯಾಚಾರಕ್ಕೊಳಗಾದ ಸಹೋದರಿಯರಿಬ್ಬರು ಸೇವಿಸಿದ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ 14 ಮತ್ತು 16 ವರ್ಷದ ಸಹೋದರಿಯರ ಮೇಲೆ ಕಾಮುಕರು ಮಾನಭಂಗ ಎಸಗಿದ್ದಾರೆ. ಇದರಿಂದ ಮನನೊಂದ ಬಾಲಕಿಯರು ಮನೆಗೆ ಬಂದು ವಿಷ ಸೇವಿಸಿದ್ದಾರೆ. ಇದರ ಪರಿಣಾಮ ಒಬ್ಬಳು ಅಸುನೀಗಿದ್ದು, ಮತ್ತೊಬ್ಬಳು ಸಾವುಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಸಿದಂತೆ ಬಾಲಕಿಯರ ಪೋಷಕರು ದೂರು ನೀಡಿದ್ದು, ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :