ತಿರುವನಂತಪುರಂ: ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸುವುದಕ್ಕೆ ವಿರೋಧದ ಬೆನ್ನಲ್ಲೂ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಕ್ಕೆ ತೆರಳುತ್ತಿದ್ದಾರೆ.ಋತುಮತಿಯಾಗುವ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದರೂ ಕೆಲವು ಸಂಘಟನೆಗಳು ಇದಕ್ಕೆ ಅಡ್ಡಿಪಡಿಸುತ್ತಿವೆ.ಇದೆಲ್ಲದರ ಮಧ್ಯೆಯೂ ತೆಲಂಗಾಣದ ಓರ್ವ ಪತ್ರಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು ದೇವಾಲಯದತ್ತ ತೆರಳುತ್ತಿದ್ದಾರೆ. ಇತ್ತ ಪ್ರತಿಭಟನಾಕಾರರು ಅವರನ್ನು ತಡೆಯಲು ಕಾದು ನಿಂತಿದ್ದಾರೆ. ನಿನ್ನೆಯಷ್ಟೇ ಓರ್ವ ಪತ್ರಕರ್ತೆ ಅರ್ಧಕ್ಕೇ ಯಾತ್ರೆ ಮೊಟಕುಗೊಳಿಸಿದ್ದರು. ಇಂದು ಈ ಇಬ್ಬರು ಮಹಿಳೆಯರು ಈಗಾಗಲೇ ಬೆಟ್ಟ ಏರಲು