ಮಾಲಿಕ ಕಡಿಮೆ ವೇತನ ನೀಡಿದ್ದಕ್ಕೆ ಪುತ್ರನಿಗೆ ಈ ಶಿಕ್ಷೆಯೇ?!

ಲಕ್ನೋ| Krishnaveni K| Last Modified ಸೋಮವಾರ, 22 ಫೆಬ್ರವರಿ 2021 (09:22 IST)
ಲಕ್ನೋ: ಮಾಲಿಕ ಕಡಿಮೆ ವೇತನ ನೀಡುತ್ತಿದ್ದರಿಂದ ಬೇಸತ್ತ ಇಬ್ಬರು ಯುವಕರು ಆತನ 5 ವರ್ಷದ ಮಗನನ್ನೇ ಅಪಹರಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 
ಇಬ್ಬರು ಯುವಕರಿಗೆ ಕೆಲಸ ನೀಡಿದ್ದ ಮಾಲಿಕ ಪ್ರತಿನಿತ್ಯ ಕೇವಲ 30 ರಿಂದ 50 ರೂ.ವರೆಗೆ ಮಾತ್ರ ಕೂಲಿ ನೀಡುತ್ತಿದ್ದ. ಇದರಿಂದ ಇಬ್ಬರೂ ಯುವಕರು ಬೇಸತ್ತು ಹೋಗಿದ್ದರು. ಹೀಗಾಗಿ ಮಾಲಿಕನ ವಿರುದ್ಧ ಸೇಡು ತೀರಿಸಲು ಆತನ ಪುತ್ರನನ್ನು ಅಪಹರಿಸಿ ಹೀನ ಕೃತ್ಯವೆಸಗಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂದಿ ಧಾರವಾಹಿಯೊಂದರ ಪ್ರೇರಣೆಯಿಂದ ಇಬ್ಬರೂ ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :