ಕಲಬುರಗಿ : ಸುತ್ತಮುತ್ತಲಿನ ಜಿಲ್ಲೆಗಳ ಅನುಕೂಲಕ್ಕಾಗಿ ಕಲಬುರಗಿ ವಿಮಾನ ನಿಲ್ದಾಣದಿಂದ ಹಲವು ಲೋಹದ ಹಕ್ಕಿಗಳು ಬೇರೆ-ಬೇರೆ ರಾಜ್ಯಗಳಿಗೆ ಹಾರಾಡುವಂತೆ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ ಹೇಳಿದರು. ಸೋಮವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗೋವಾ-ಕಲಬುರಗಿ ವಯಾ ಹೈದ್ರಾಬಾದ್ ವಿಮಾನ ಹಾರಾಟವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಕಲಬುರಗಿ ಜಿಲ್ಲೆಯ ವೃದ್ಧರು, ರೋಗಿಗಳು ತುರ್ತು ಚಿಕಿತ್ಸೆಗಾಗಿ ಹೈದ್ರಾಬಾದಿಗೆ ಹಾಗೂ ಹೈದ್ರಾಬಾದ್ನಿಂದ ಬೆಂಗಳೂರಿಗೆ ತೆರಳಲು