ಮುಂಬೈ : ಕನ್ನಡಿಗರ ಸ್ವಾಭಿಮಾನ, ಅಸ್ಮಿತೆಯನ್ನು ಮಹಾರಾಷ್ಟ್ರ ರಾಜಕಾರಣಿಗಳು ಕೆಣಕಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆದಾಗಲೆಲ್ಲಾ ಗಡಿ ವಿಚಾರವನ್ನು ಕೆದಕುವುದು ಪುಂಡ ಮರಾಠಿಗರ ಕಾಯಕವಾಗಿಬಿಟ್ಟಿದೆ. ಕಳೆದ 20 ದಿನಗಳಿಂದ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬೂದಿಮುಚ್ಚಿದ ವಾತಾವರಣ ನಿರ್ಮಾಣವಾಗಿದೆ. ಗಡಿ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ಆದರೂ ಹಿಂದಿನ ಉದ್ಧವ್ ಠಾಕ್ರೆ ಸರ್ಕಾರ ಮತ್ತು ಇಂದಿನ ಏಕನಾಥ್ ಶಿಂಧೆ ಸರ್ಕಾರ ಮತ್ತೆ ಕನ್ನಡಿಗರನ್ನು ಕೆಣಕಿದೆ.ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಆಡಳಿತದಲ್ಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ