ಮಹಾರಾಷ್ಟ್ರ: ನಿರುದ್ಯೋಗಿ ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಮುಂಬೈನ ಮಾಲಾಡ್ ಪ್ರದೇಶದಲ್ಲಿ ನಡೆದಿದೆ. ಧನರಾಜ್(24), ಕಾಜಲ್(19) ಆತ್ಮಹತ್ಯೆಗೆ ಶರಣಾದ ದಂಪತಿ. ಕೆಲತಿಂಗಳ ಹಿಂದಷ್ಟೇ ಕಾಜಲ್, ಧನರಾಜ್ ಮದುವೆಯಾಗಿತ್ತು. ಮದುವೆಯಾದ ಸ್ವಲ್ಪ ದಿನದಲ್ಲೇ ಧನರಾಜ್ ಉದ್ಯೋಗ ಕಳೆದುಕೊಂಡಿದ್ದ. ಇದರಿಂದ ಬೇಸತ್ತು ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ದಂಪತಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮುಂಬೈ ಪೊಲೀಸರು