ನವದೆಹಲಿ : ಕರ್ತವ್ಯಕ್ಕೆ ಸಂಬಂಧಿಸಿದಂತೆ ಗರ್ಭಿಣಿಯರಿಗೆ ಹೊರಡಿಸಿದ್ದ ಮಾರ್ಗಸೂಚಿಯು ವಿವಾದಕ್ಕೆ ಸಿಲುಕುತ್ತಿದ್ದಂತೆ ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹಿಂತೆಗೆದುಕೊಂಡಿದೆ.ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಲು ʼತಾತ್ಕಾಲಿಕವಾಗಿ ಅನರ್ಹರುʼ ಎಂದು ಎಸ್ಬಿಐ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿತ್ತು. ಮಾರ್ಗಸೂಚಿಯನ್ನು ವಿರೋಧಿಸಿ ದೆಹಲಿ ಮಹಿಳಾ ಆಯೋಗವು (ಡಬ್ಲ್ಯೂಡಿಸಿ), ಎಸ್ಬಿಐಗೆ ನೋಟಿಸ್ ಜಾರಿ ಮಾಡಿತ್ತು. ದೆಹಲಿ ಮಾರ್ಗಸೂಚಿಯನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ, ಬ್ಯಾಂಕ್ನ ಕ್ರಮವು