ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಹಗುರವಾಗಿ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದ ಕೇಂದ್ರ ಸಚಿವ ರಾಮ್ ದಾಸ್ ಅಥವಾಲೆ ಕ್ಷಮೆ ಯಾಚಿಸಿದ್ದಾರೆ.ನಾನು ಕೇಂದ್ರ ಸಚಿವ. ಹಾಗಾಗಿ ನನಗೆ ಪೆಟ್ರೋಲ್ ಬೆಲೆ ಏರಿಕೆ ಬಿಸಿ ತಟ್ಟಿಲ್ಲ. ಸಚಿವ ಸ್ಥಾನ ಹೋದರೆ ಮಾತ್ರ ನನಗೆ ನಷ್ಟವಾಗುತ್ತದೆ ಎಂದು ರಾಮ್ ದಾಸ್ ಹೇಳಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.ಮಾಧ್ಯಮ ಮಂದಿ ನನ್ನಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದ ನಿಮಗೆ ತೊಂದರೆಯಾಗಿದೆಯೇ ಎಂದು ಕೇಳಿದ್ದರು.