ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಸಚಿವರ ಸ್ಥಾನಮಾನ ಕಡಿಮೆಯಾಗಿದೆ ಎಂದು ಬಿಜೆಪಿ ಸಂಸದ ಶತೃಜ್ಞ ಸಿನ್ಹಾ ಟೀಕಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಸಿಯಿದ ಅವರು, ಸರ್ಕಾರ ಏಕ ವ್ಯಕ್ತಿಯ ಸೇನೆಯಾಗಿದ್ದು, ಪಕ್ಷ ಇಬ್ಬರು ವ್ಯಕ್ತಿಗಳ ಸೇನೆಯಾಗಿದೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ. ಬಹಳಷ್ಟು ಜನರು ಇದನ್ನೇ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವರ ಸ್ಥಾನಮಾನ ಕಡಿಮೆಯಾಗಿರುವುದು ಒಪ್ಪಿಕೊಳ್ಳಲೆಬೇಕು. ಬಹಳಷ್ಟು ಜನರಿಗೆ ಶೇ 80ರಷ್ಟು ಸಚಿವರ ಬಗ್ಗೆ ಗೊತ್ತೇಯಿಲ್ಲ.