ಸ್ವಾತಂತ್ರ್ಯ ದಿನೋತ್ಸವದಲ್ಲಿ ಸೀರೆಗಾಗಿ ಹುಡುಕಾಟ ನಡೆಸಿದ್ದ ಅಮೆರಿಕದ ರಾಯಭಾರ ಕಚೇರಿ ಮಹಿಳಾ ಅಧಿಕಾರಿ ಮೇರಿಕಾಯ್ ಕಾರ್ಲ್`ಸನ್`ಗೆ ಕೊನೆಗೂ ಒಂದೊಳ್ಳೆ ಸೀರೆ ಸಿಕ್ಕಿದೆ. ಬಣ್ಣ ಬಣ್ಣದ ಸೀರೆಯುಟ್ಟು ಸ್ವಾತಂತ್ರ್ಯ ದಿನೋತ್ಸವದಲ್ಲಿ ಪಾಲ್ಗೊಂಡಿದ್ಧಾರೆ. ಮೇರಿಕಾಯ್ ಹಲವು ದಿನಗಳಿಂದ ಟ್ವಿಟ್ಟರ್`ನಲ್ಲಿ ಸೀರೆಗಾಗಿ ಕೋರಿಕೆ ಇಟ್ಟಿದ್ದರು. ಭಾರತೀಯ ಸಂಪ್ರದಾಯದಂತೆ ಸೀರೆಯುಟ್ಟು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕಿದೆ. ಹೀಗಾಗಿ, ನನಗೊಂದು ಒಳ್ಳೆಯ ಸೀರೆಯನ್ನ ಸೆಲೆಕ್ಟ್ ಮಾಡಿ ಎಂದು ಮೇರಿ ಕಾಯ್ ಹಲವು ದಿನಗಳಿಂದ ಟ್ವಿಟ್ಟರ್`ನಲ್ಲಿ ಕೇಳಿಕೊಂಡಿದ್ದರು. #SareeSearch ಹ್ಯಾಶ್ ಟ್ಯಾಗ್