ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಕಾರನ್ನು ಅಡ್ಡಗಟ್ಟಿ ನಾಲ್ಕು ಮಹಿಳೆಯರ ಮೇಲೆ ಗ್ಯಾಂಗ್ ರೇಪ್

ಉತ್ತರಪ್ರದೇಶ| chandralekha| Last Modified ಗುರುವಾರ, 25 ಮೇ 2017 (12:29 IST)
ನೋಯ್ಡಾ:ಮೇ-25: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ನಾಲ್ವರು ಮಹಿಳೆಯರ ಮೇಲೆ ಗ್ಯಾಂಗ್‌ ರೇಪ್‌ ನಡೆಸಿ, ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆಗೈದು ಚಿನ್ನಾಭರಣ-ಹಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. 
 
ಬುಲಂದ್‌ಶಹರ್‌ನ ಆಸ್ಪತ್ರೆಯೊಂದರಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಮಗುವೊಂದನ್ನು ನೋಡಲೆಂದು ಕಾರಿನಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಇಬ್ಬರು ಪುರುಷರು ತೆರಳುತ್ತಿದ್ದರು. ಈ ವೇಳೆ 6-7 ಮಂದಿ ದುಷ್ಕರ್ಮಿಗಳ ಗುಂಪು ಕಾರಿನ ಚಕ್ರಕ್ಕೆ ಗನ್ ಪಾಂಟ್ ನಿಂದ ಗುಂಡಿಕ್ಕಿ ನಿಲ್ಲಿಸಿದ್ದಾರೆ.  ಕೈಯಲ್ಲಿ ಗನ್‌ ಹಿಡಿದು ಬೆದರಿಸಿ ನಾಲ್ವರು ಮಹಿಳೆಯರ ಮೇಲೆ ಗ್ಯಾಂಗ್‌ ರೇಪ್‌ ನಡೆಸಿದ್ದಾರೆ. ಈ ವೇಳೆ ತಡೆಯಲು ಮುಂದಾದ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ವ್ಯಕ್ತಿ ಸಾವನ್ನಪ್ಪು ತ್ತಿದ್ದಂತೆ 14 ಸಾವಿರ ರೂಪಾಯಿ ಹಣ ಮತ್ತು ಚಿನ್ನಾಭರಣಗಳೊಂದಿಗೆ ಸ್ಥಳದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಂಡಗಳನ್ನು ರಚಿಸಿ ದುಷ್ಕರ್ಮಿಗಳಿಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. 
 
 


ಇದರಲ್ಲಿ ಇನ್ನಷ್ಟು ಓದಿ :