ಸಮುದ್ರ ವಿಮಾನ ಸೇವೆ ಆರಂಭಿಸಲು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದ ಯುಪಿ ಸರ್ಕಾರ

ಉತ್ತರ ಪ್ರದೇಶ| Ramya kosira| Last Modified ಗುರುವಾರ, 9 ಸೆಪ್ಟಂಬರ್ 2021 (12:49 IST)
ಉತ್ತರ ಪ್ರದೇಶ :  ಸರ್ಕಾರವು ವಾರಣಾಸಿ ಹಾಗೂ ಗೋರಕ್ಪುರದ ನಡುವೆ ರಾಜ್ಯದ ಮೊಟ್ಟ ಮೊದಲ ಸಮುದ್ರ ವಿಮಾನ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಅನುಮತಿ ಕೋರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದೆ.
ಉತ್ತರ ಪ್ರದೇಶದ ನಾಗರಿಕ ವಿಮಾನಯಾನ ಸಚಿವ ನಂದ ಗೋಪಾಲ್ ಗುಪ್ತಾ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ಭೇಟಿಯ ವೇಳೆ ಗೋರಕಪುರದಿಂದ ವಾರಣಾಸಿಗೆ ಸೀ ಪ್ಲೇನ್ ಸೇವೆಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಜೊತೆಯಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಇನ್ನೂ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.> ನಂದಗೋಪಾಲ ಗುಪ್ತಾ ನಂದಿ ಜ್ಯೋತಿರಾದಿತ್ಯ ಸಿಂಧಿಯಾ ಬಳಿ ಸೀ ಪ್ಲೇನ್ ಸೇವೆಯ ಸಂಬಂಧ ತುರ್ತು ಕ್ರಮ ಜಾರಿಗೆ ಬರುವಂತೆ ಹಾಗೂ ಈ ಯೋಜನೆಯ ಸಂಬಂಧ ಅಧ್ಯಯನ ನಡೆಸುವಂತೆ ಕೇಳಿದ್ದಾರೆ ಎನ್ನಲಾಗಿದೆ.> ಸೀ ಪ್ಲೇನ್ ಸೇವೆಯು ಭೂಮಿ ಹಾಗೂ ಜಲಮಾರ್ಗಗಳರೆಡರಲ್ಲಿಯೂ ಚಲಿಸುವ ಸಾಮರ್ಥ್ಯ ಹೊಂದಿದೆ. ಕೇಂದ್ರ ದೇಶದಲ್ಲಿ ಒಟ್ಟು 100 ಸಮುದ್ರ ವಿಮಾನ ಸೇವೆ ಆರಂಭಕ್ಕೆ ಯೋಚನೆ ನಡೆಸಿದೆ ಎನ್ನಲಾಗಿದೆ.  



ಇದರಲ್ಲಿ ಇನ್ನಷ್ಟು ಓದಿ :