ನವದೆಹಲಿ : ಜಿ20 ಶೃಂಗಸಭೆಯಲ್ಲಿ ಭಾರತ ತನ್ನ ಡಿಜಿಟಲ್ ಸಾಮಥ್ರ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಸಜ್ಜಾಗಿದೆ. ಸುಮಾರು 1,000 ವಿದೇಶಿ ಪ್ರತಿನಿಧಿಗಳಿಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ತಂತ್ರಜ್ಞಾನದ ಅನುಭವ ನೀಡಲು ತಯಾರಿ ಮಾಡಿಕೊಂಡಿದೆ. ಯುಪಿಐ ವಹಿವಾಟುಗಳನ್ನು ಮಾಡಲು ಬಯಸುವ ವಿದೇಶಿ ಪ್ರತಿನಿಧಿಗಳಿಗೆ ಅವರ ಯುಪಿಐ ವ್ಯಾಲೆಟ್ಗಳಲ್ಲಿ 500-1,000 ರೂ. ನೀಡಲಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಸರ್ಕಾರ ಸುಮಾರು 10 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು