ಮದುವೆಯಾಗಲು ನಿರಾಕರಿಸಿದ ಗೆಳೆಯನ ಜನನಾಂಗಗಳನ್ನು ಕತ್ತರಿಸಿದ 23 ವರ್ಷ ವಯಸ್ಸಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಗೆಳೆಯನನ್ನು ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 35 ವರ್ಷ ವಯಸ್ಸಿನ ರವಿ ಎಂಬಾತನಿಗೆ ಸಂಬಂಧಿಯೊಬ್ಬರು 11.30 ಗಂಟೆಗೆ ಕರೆ ಮಾಡಿ, ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿರುವ ನಿನ್ನ ಗೆಳತಿಯ ಮನೆಗೆ ತೆರಳುವಂತೆ ಮಾಹಿತಿ ನೀಡಿದ್ದಾರೆ. ಗೆಳತಿಯ ಮನೆಯಲ್ಲಿ ಇಂತಹ ಹೇಯ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.