Widgets Magazine

ಆರೇ ತಿಂಗಳಲ್ಲಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ನಟಿ ಊರ್ಮಿಳಾ ಮಾರ್ತೋಂಡ್ಕರ್

ನವದೆಹಲಿ| Krishnaveni K| Last Modified ಬುಧವಾರ, 11 ಸೆಪ್ಟಂಬರ್ 2019 (10:01 IST)
ನವದೆಹಲಿ: ಕಳೆದ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ನಟಿ ಊರ್ಮಿಳಾ ಮಾರ್ತೋಂಡ್ಕರ್ ಈಗ ಆರೇ ತಿಂಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

 
ಮುಂಬೈ ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಊರ್ಮಿಳಾ ಬಿಜೆಪಿಯ ಗೋಪಾಲ ಶೆಟ್ಟಿ ವಿರುದ್ಧ ಸೋತಿದ್ದರು.
 
‘ಪಕ್ಷದೊಳಗಿನ ಆಂತರಿಕ ತಿಕ್ಕಾಟದಿಂದ ಬೇಸತ್ತು ಪಕ್ಷದಿಂದ ಹೊರಬರುತ್ತಿದ್ದೇನೆ’ ಎಂದು ಊರ್ಮಿಳಾ ಕಾರಣ ತಿಳಿಸಿದ್ದಾರೆ. ಮುಂಬೈಯಲ್ಲಿ ಕಾಂಗ್ರೆಸ್ ನಾಯಕರೊಳಗಿನ ತಿಕ್ಕಾಟದ ಪರಿಣಾಮವಾಗಿ ಊರ್ಮಿಳಾ ಪಕ್ಷಕ್ಕೆ ಬಂದಷ್ಟೇ ವೇಗವಾಗಿ ಹೊರನಡೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :