ಪುತ್ರ ಇಂಜಿನಿಯರ್ ಆಗಬೇಕೆಂದು ಬಯಸಿ ಗಣಿತ ವಿಷಯಕ್ಕೆ ಹೆಚ್ಚು ಒತ್ತು ಕೊಡು ಎಂದು ಪುತ್ರನ ಮೇಲೆ ಒತ್ತಡ ಹೇರಿರುವುದೇ ತಂದೆಯ ಹತ್ಯೆಗೆ ಕಾರಣವಾಯಿತು ಎಂದರೆ ನಂಬಲು ಸಾಧ್ಯವೇ? ನಂಬಲೇಬೇಕು ಇದು ಸತ್ಯ ಘಟನೆ. ಉತ್ತರಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿರುವ 45 ವರ್ಷ ವಯಸ್ಸಿನ ಮೋತಿಲಾಲ್ ಪಾಲ್, ಪುತ್ರ ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುತ್ತಿದ್ದನು. ಅದಕ್ಕಾಗಿ 16 ವರ್ಷ ವಯಸ್ಸಿನ ಪುತ್ರನಿಗೆ ಗಣಿತ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ