ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಭಾಗವಾಗಿ ಇಂದು ಉತ್ತರ ಪ್ರದೇಶದಲ್ಲಿ 4ನೇ ಹಂತದ ಮತದಾನ ನಡೆಯುತ್ತಿದೆ. 12 ಜಿಲ್ಲೆಗಳ 53 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು 689 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಿಂದುಳಿದ ಜಿಲ್ಲೆ ಬುಂದೇಲಖಂಡ, ನೆಹರು-ಗಾಂಧಿ ಮನೆತನದ ಭದ್ರಕೋಟೆ ರಾಯ್ ಬರೇಲಿ, ಲಲಿತ್ ಪುರ್, ಮಹೋಬಾ, ಬಂದಾ, ಹಮಿರ್ಪುರ್, ಚಿತ್ರಕೂಟ್, ಕೌಶಂಬಿ, ಅಲಹಾಬಾದ್, ಜಲೌನ್, ಝಾನ್ಸಿ ಜಿಲ್ಲೆಗಳಳ್ಲಿ ಮತದಾನ ನಡೆಯುತ್ತಿದೆ. 1998ರಿಂದೀಚೆಗೆ ಇದೇ ಮೊದಲ ಬಾರಿಗೆ ಸೋನಿಯಾ