ಡೆಹ್ರಾಡೂನ್: ಹರಿದ ಜೀನ್ಸ್ ಪ್ಯಾಂಟ್ ತೊಡುವುದು ಇಂದಿನ ಫ್ಯಾಷನ್. ಆದರೆ ಈ ಬಗ್ಗೆ ಉತ್ತರಾಖಂಡ ಸಿಎಂ ತಿರಾತ್ ಸಿಂಗ್ ರಾವತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಹರಿದ ಜೀನ್ಸ್ ತೊಡುವುದು ಆಧುನಿಕ ಸಮಾಜದಲ್ಲಿ ಸಾಮಾಜಿಕ ಅಧಃಪತನದ ಸಂಕೇತ ಎಂದು ತಿರಾತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇದೆಂಥಾ ಸಂಸ್ಕೃತಿ ಎಂದು ಅವರು ಲೇವಡಿ ಮಾಡಿದ್ದಾರೆ.‘ಮೊಣಕಾಲು ಕಾಣುವ ಹಾಗೆ ಚಿಂದಿ ಜೀನ್ಸ್ ತೊಡುವುದು ಮತ್ತು ಶ್ರೀಮಂತರಂತೆ ತೋರಿಸಿಕೊಳ್ಳುವುದು- ಇತ್ತೀಚೆಗೆ ಯುವಜನಾಂಗಕ್ಕೆ ಇಂಥಾ ಸಂಸ್ಕೃತಿಯನ್ನೇ ಹೇಳಿಕೊಡಲಾಗುತ್ತದೆ. ಇವೆಲ್ಲಾ ಮನೆಯಿಂದಲ್ಲದೆ ಬೇರೆ