ಉತ್ತರಖಾಂಡದ ಹೈಕೋರ್ಟ್ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ರಾಷ್ಟ್ರಪತಿಗಳ ನಿರ್ಧಾರ ಕೂಡ ನ್ಯಾಯಾಂಗ ಪುನರ್ವಿಮರ್ಶೆಗಿಂತ ಮೇಲಲ್ಲ ಎಂದು ಹೇಳಿದೆ. ಉತ್ತರಾಖಂಡದಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಿಕೆ ಕುರಿತು ವಿಚಾರಣೆ ಸಂದರ್ಭದಲ್ಲಿ ಕೇಂದ್ರಸರ್ಕಾರವು ರಾಷ್ಟ್ರಪತಿಗಳ ಅನುಮತಿಯನ್ನು ಕೋರ್ಟ್ ಪ್ರಶ್ನಿಸುವಂತಿಲ್ಲ ಎಂದು ಹೇಳಿದಾಗ ನ್ಯಾಯಾಧೀಶರು ಕೆರಳಿ ಕೆಂಡವಾದರು. ರಾಜನ ನಿರ್ಧಾರವನ್ನು ನ್ಯಾಯಾಂಗ ವಿಮರ್ಶೆಗೆ ಒಳಪಡಿಸಲಾಗದೆಂಬ ಕಾನೂನಿಲ್ಲ. ಇದು ನಮ್ಮ ಸಂವಿಧಾನದ ಸತ್ವವಾಗಿದೆ. ರಾಷ್ಟ್ರಪತಿ ನಿರ್ಧಾರ ಕೂಡ ಕೆಲವು ಬಾರಿ ತಪ್ಪಾಗಬಹುದು. ಪ್ರತಿಯೊಂದು