ಮಣ್ಣಿನ ಮಗ ನರೇಂದ್ರ ಮೋದಿ ಗೆಲುವನ್ನು ಆಚರಿಸಲು ಅವರ ತವರು ವಡ್ನಾಗರ್ ಸಂಭ್ರಮದಿಂದ ಸಿದ್ಧವಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಮೋದಿ ಭಾರತದ ಪ್ರಧಾನಿ ಆಗುತ್ತಾರೆಂದು ಭವಿಷ್ಯ ನುಡಿದಿರುವುದರಿಂದ ಅವರ ಹುಟ್ಟೂರು ಅಮಿತಾನಂದಲ್ಲಿ ಮುಳುಗಿ ತೇಲುತ್ತಿದ್ದು ಇಡಿ ಊರನ್ನು ಅಲಂಕೃತಗೊಳಿಸುವ ಕೆಲಸ ಭರದಿಂದ ಸಾಗಿದೆ.