ವಾಜಪೇಯಿ ಬಗ್ಗೆ ಆತಂಕದ ಸುದ್ದಿಗೆ ದೇಶ ಸಾಕ್ಷಿಯಾಗಬೇಕಾಗುತ್ತಾ? ಪ್ರಧಾನಿ ಮೋದಿ ಭೇಟಿಯಾದ ತಕ್ಷಣ ಏಮ್ಸ್ ವೈದ್ಯರಿಂದ ಸುದ್ದಿಗೋಷ್ಠಿ

ನವದೆಹಲಿ| Krishnaveni K| Last Modified ಗುರುವಾರ, 16 ಆಗಸ್ಟ್ 2018 (11:02 IST)
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ತೀವ್ರ ಬಿಗಡಾಯಿಸಿರುವ ಹಿನ್ನಲೆಯಲ್ಲಿ ದೇಶವೇ ಆತಂಕದಿಂದ ಪ್ರಾರ್ಥನೆ ಮಾಡುತ್ತಿದೆ.

ಬಿಜೆಪಿ ಮಾತ್ರವಲ್ಲದೆ ಹೆಚ್ಚಿನ ರಾಜಕೀಯ ನಾಯಕರು ಇದೀಗ ಏಮ್ಸ್ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಆಸ್ಪತ್ರೆಗೆ ಭೇಟಿ ಮಾಡಲಿದ್ದು, ಅದಾದ ತಕ್ಷಣವೇ ಏಮ್ಸ್ ವೈದ್ಯರು ಸುದ್ದಿಗೋಷ್ಠಿ ನಡೆಸಲಿದ್ದಾರೆ.


ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳು ಇಂದು ರದ್ದುಗೊಳಿಸಿದೆ. ಆಸ್ಪತ್ರೆಯ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗುತ್ತಿದೆ. ಯಾವುದೇ ಹೊಸ ರೋಗಿಗಳ ದಾಖಲಾತಿಗೂ ಏಮ್ಸ್ ನಲ್ಲಿ ಅವಕಾಶ ನೀಡಲಾಗುತ್ತಿಲ್ಲ. ಇನ್ನೊಂದೆಡೆ ಅಟಲ್ ಬಿಹಾರಿ ವಾಜಪೇಯಿ ಅವರ ಕುಟುಂಬ ವರ್ಗದವರಿಗೂ ಕರೆ ನೀಡಲಾಗಿದೆ. ಅವಿವಾಹಿತರಾಗಿದ್ದ ವಾಜಪೇಯಿ ಅವರ ದತ್ತು ಪುತ್ರಿ ಕೂಡಾ ಕೆಲವೇ ಕ್ಷಣಗಳಲ್ಲಿ ಇಲ್ಲಿಗೆ ತಲುಪಲಿದ್ದಾರೆ. ಇವನ್ನೆಲ್ಲಾ ನೋಡುತ್ತಿದ್ದರೆ ದೇಶ ಆಘಾತಕಾರಿ ಸುದ್ದಿಯೊಂದಕ್ಕೆ ಸಾಕ್ಷಿಯಾಗಬೇಕಾಗಬಹುದು ಎಂಬ ಲಕ್ಷಣ ತೋರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :