ವಾಜಪೇಯಿ ನಿಧನ ಹಿನ್ನೆಲೆ; ತುರ್ತು ಸಭೆ ಕರೆದ ಪ್ರಧಾನಿ ಮೋದಿ

ನವದೆಹಲಿ| pavithra| Last Modified ಗುರುವಾರ, 16 ಆಗಸ್ಟ್ 2018 (18:17 IST)
ನವದೆಹಲಿ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಂಜೆ 5:05 ಕ್ಕೆ ನಿಧನರಾದರು ಎಂದು ಏಮ್ಸ್ ವೈದ್ಯರು ಖಚಿತಪಡಿಸಿದ್ದಾರೆ.

ದೆಹಲಿಯ ಪ್ರಧಾನಿ ನಿವಾಸದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ. ಸಂಜೆ 6.30ಕ್ಕೆ ಈ ಸಭೆ ನಡೆಯಲಿದೆ.

ಕೇಂದ್ರ ಸಚಿವ ಸಂಪುಟ ತುರ್ತು ಸಭೆಯಲ್ಲಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಲಾಗುವುದು. ಕ್ಯಾಬಿನೆಟ್ ಸಭೆಯಲ್ಲಿ ರಾಷ್ಟ್ರೀಯ ಶೋಕಾಚರಣೆಯ ಕುರಿತು ನಿರ್ಣಯ ಕೈಗೊಳ್ಳಲಾಗುತ್ತದೆಯಂತೆ.


ನಾಳೆ ಬಿಜೆಪಿ ಕಚೇರಿಯಲ್ಲಿ
ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಇಂದು ಸಂಜೆ 7.30ಕ್ಕೆ ದೆಹಲಿಯ ಕೃಷ್ಣಮೆನನ್ ನಿವಾಸಕ್ಕೆ ವಾಜಪೇಯಿ ಪಾರ್ಥವ ಶರೀರ ರವಾನೆ ಮಾಡಲಾಗುತ್ತದೆಯಂತೆ.


ಇದರಲ್ಲಿ ಇನ್ನಷ್ಟು ಓದಿ :