ನವದೆಹಲಿ: ಭಾರತದ ಉಪರಾಷ್ಟ್ರಪತಿಯಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿ ಇದೀಗ ನಿರ್ಗಮಿತವಾಗುತ್ತಿರುವ ಹಮೀದ್ ಅನ್ಸಾರಿ ಕೊನೆ ಗಳಿಗೆಯಲ್ಲಿ ಹೇಳಿಕೆಯೊಂದನ್ನು ನೀಡಿ ವೃಥಾ ವಿವಾದ ಮೈಮೇಲೆಳೆದುಕೊಂಡಿದ್ದಾರೆ.ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶದಲ್ಲಿ ಸದ್ಯಕ್ಕೆ ಗೋ ರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ ಎಂಬ ಭಾವನೆ ಮೂಡುತ್ತಿದೆ ಎಂದಿದ್ದರು.ಈ ಹೇಳಿಕೆಗೆ ಇದೀಗ ಬಿಜೆಪಿ ಸೇರಿದಂತೆ ಹಲವೆಡೆಯಿಂದ ವಿರೋಧ ವ್ಯಕ್ತವಾಗಿದೆ. ಭಾರತದಷ್ಟು ಸುರಕ್ಷಿತ ಸ್ಥಳ ಮುಸ್ಲಿಮರಿಗೆ ಬೇರೊಂದಿಲ್ಲ.