ಪುಡುಚೇರಿ: ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮತ್ತು ದೇಶದ ವಿಷಯ ಬಂದಾಗ ಭಾರತದ ತ್ರಿವರ್ಣ ಧ್ವಜವೇ ಪ್ರಥಮ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಪುಡುಚೇರಿಯಲ್ಲಿ ನಡೆದ ಹರ್ ಘರ್ ತಿರಂಗಾ ಯಾತ್ರೆಯ ಚಾಲನಾ ಕಾರ್ಯಕ್ರಮದ ವೇಳೆಯಲ್ಲಿ ಸಂಭವಿಸಿದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸೌಂಡ್ ಮಾಡುತ್ತಿದೆ. ಕೇಸರಿ (ಭಗವಾ) ಧ್ವಜವನ್ನು ನೀಡಲು ಬಂದ ನಾಯಕನನ್ನು ತಡೆದು, ಗೃಹ ಸಚಿವರು ರಾಷ್ಟ್ರಧ್ವಜವನ್ನೇ ಕೋರಿ ಪಡಕೊಂಡ ಘಟನೆ ರಾಷ್ಟ್ರಪ್ರೇಮಿಗಳ