Widgets Magazine

ನಾನೊಬ್ಬ ಅಂತರಾಷ್ಟ್ರೀಯ ಉದ್ಯಮಿ, ಓಡಿ ಹೋಗಿಲ್ಲ: ವಿಜಯ್ ಮಲ್ಯ

ಲಂಡನ್| Jaya| Last Modified ಶುಕ್ರವಾರ, 11 ಮಾರ್ಚ್ 2016 (10:27 IST)
ತಾವು ದೇಶ ಬಿಟ್ಟು ಪಲಾಯನ ಮಾಡಿರುವುದಾಗಿ ಆರೋಪಿಸುತ್ತಿರುವುದಕ್ಕೆ ಮದ್ಯದ ದೊರೆ ಗರಂ ಆಗಿದ್ದಾರೆ. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಅವರು ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಾನು ತಲೆ ಮರೆಸಿಕೊಂಡಿಲ್ಲ. ದೇಶದಿಂದ ಪಲಾಯನ ಮಾಡಿಲ್ಲ. ಅಂತರಾಷ್ಟ್ರೀಯ ಉದ್ಯಮಿಯಾಗಿರುವುದರಿಂದ ವಿದೇಶಗಳಿಗೆ ಪ್ರವಾಸ ಮಾಡುವುದು ಸಾಮಾನ್ಯವಾದುದು.

ಭಾರತದ ಸಂಸದನಾಗಿ ಈ ನೆಲದ ಕಾನೂನನ್ನು ಗೌರವಿಸುತ್ತೇನೆ. ನಮ್ಮ ಕಾನೂನು ವ್ಯವಸ್ಥೆ ಗಟ್ಟಿಯಾಗಿದ್ದು ಅದಕ್ಕೆ ಬದ್ಧನಾಗಿದ್ದೇನೆ. ಮಾಧ್ಯಮಗಳು ಕೋರ್ಟ್‌ನಂತೆ ವರ್ತಿಸಬಾರದು. ನನ್ನ ಆಸ್ತಿವಿವರಗಳು ಬ್ಯಾಂಕ್‌ಗಳಿಗೆ ಗೊತ್ತಿಲ್ಲವೇ?
ಟೈಮ್ಸ್ ನೌ ಸಂಪಾದಕರು ಜೈಲು ಬಟ್ಟೆಯಲ್ಲಿರಬೇಕು. ಸುಳ್ಳು ಆರೋಪ, ತುಚ್ಛವಾಗಿ ವರ್ತಿಸಿರುವ ಅವರು ಜೈಲು ಊಟ ಮಾಡಬೇಕು. ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಮಾಧ್ಯಮಗಳು ಮನಬಂದಂತೆ ಸುದ್ದಿ ಪ್ರಕಟಿಸುತ್ತಿವೆ. ನಾನು ನೀಡಿರುವ ಸಹಾಯ ಸಹಕಾರವನ್ನು ಮೀಡಿಯಾಗಳು ಮರೆಯಬಾರದು. ಅದಕ್ಕೆ ದಾಖಲೆಗಳಿವೆ. ಮಾಧ್ಯಮಗಳು ಬೆನ್ನು ಬಿದ್ದರೆ ಸತ್ಯ ಮತ್ತು ವಾಸ್ತವಗಳು ಸುಟ್ಟು ಹೋಗುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಲ್ಯ ಕಿಡಿಕಾರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :