ನವದೆಹಲಿ: ಸಾಲ ಮಾಡಿ ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಟ್ವೀಟ್ ಒಂದನ್ನು ರಿಟ್ವೀಟ್ ಮಾಡಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.ಆಗಾಗ ಮಲ್ಯ ತಲೆಮರೆಸಿಕೊಂಡು ಓಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೂಷಿಸುವ ರಾಹುಲ್ ಗಾಂಧಿಗೆ ಇದೇ ವಿಚಾರವಾಗಿ ಬಿಜೆಪಿ ಕಾಲೆಳೆದಿದೆ.ಪ್ರಧಾನಿ ಮೋದಿಯವರು ಕಪ್ಪು ಹಣ ತರುವುದಾಗಿ ಹೇಳಿದ್ದು ದೊಡ್ಡ ಮೋಸ ಎಂದು ರಾಹುಲ್ ಮಾಡಿದ ಟ್ವೀಟ್ ನ್ನು ಮಲ್ಯ ರಿಟ್ವೀಟ್