ಅಸ್ಸಾಂ: ಮಹಿಳೆಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿಯನ್ನು ಜೀವಂತ ದಹನ ಮಾಡಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಕೊಲೆ ಪ್ರಕರಣದ ಬಗ್ಗೆ ಗ್ರಾಮಸ್ಥರೇ ವಿಚಾರಣೆ ನಡೆಸಿ ಆರೋಪಿಗೆ ಜೀವಂತ ದಹಿಸುವ ಶಿಕ್ಷೆ ನೀಡಿದ್ದಾರೆ. ಅದರಂತೆ ಆರೋಪಿಯನ್ನು ಸುಡಲಾಗಿದೆ.ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಆರೋಪಿ ಮೃತಪಟ್ಟಿದ್ದ. ಇದೀಗ ಗ್ರಾಮಸ್ಥರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.