ಇಂದು ಸಹೋದರ- ಸಹೋದರಿ ಬಾಂಧವ್ಯದ ಪವಿತ್ರ ಹಬ್ಬ ರಕ್ಷಾಬಂಧನವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಪ್ರತಿವರ್ಷದಂತೆ ಈ ಬಾರಿಯೂ ಪ್ರಧಾನಿ ಮೋದಿಗೆ ರಾಖಿ ಕಟ್ಟಲಿದ್ದಾರೆ ಬೃಂದಾವನ ಮತ್ತು ವಾರಣಾಸಿಯ ವಿಧವಾ ಮಹಿಳೆಯರು. ಬೃಂದಾವನ ಮತ್ತು ವಾರಣಾಸಿಯಲ್ಲಿರುವ ಸುಮಾರು 2,000 ವಿಧವಾ ಮಹಿಳೆಯರ ಪರವಾಗಿ 10 ಮಹಿಳೆಯರು ದೆಹಲಿಗೆ ಆಗಮಿಸಿ ಪ್ರಧಾನಿ ಮೋದಿಯನ್ನು ಕಂಡು ರಕ್ಷಾಬಂಧನವನ್ನು ಕಟ್ಟಲಿದ್ದಾರೆ. ಇದರ ಹೊರತಾಗಿ, ಬೃಂದಾವನದ ವಿಧನೆಯರು ಸುಮಾರು 1,000 ರಾಖಿಗಳನ್ನು ಪ್ರಧಾನಿಯವರಿಗೆ ಕಳುಹಿಸಲಿದ್ದಾರೆ.