ಶಬರಿಮಲೆ: ಕೇರಳದ ವಕ್ಫ್ ಸಚಿವ ಡಾ. ಕೆ.ಟಿ. ಜಲೀಲ್ ಶನಿವಾರ ಮಧ್ಯರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಅಯ್ಯಪ್ಪ ದರ್ಶನ ಮಾಡಿಕೊಂಡು ಬಂದಿರುವ ಕುರಿತು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ದೇವಸ್ಥಾನದಲ್ಲಿ ತೀರ್ಥ ಸ್ವೀಕರಿಸುತ್ತಿರುವ ಹಾಗೂ ದೇಗುಲದಲ್ಲಿರುವ ಪೂರೋಹಿತರ ಜೊತೆ ಮಾತುಕತೆ ನಡೆಸುತ್ತಿರುವ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಮುಸ್ಲಿಂ ಸಚಿವರೊಬ್ಬರು