ಡೆಹ್ರಾಡೂನ್ : ಸಶಸ್ತ್ರ ಪಡೆಗಳ ಮುಖ್ಯಸ್ಥರ ನಿಧನದಿಂದಾಗಿ ಅವರ ಗ್ರಾಮದಲ್ಲಿ ಮೌನ ಆವರಿಸಿದೆ. ಉತ್ತರಾಖಂಡದ ಪೌರಿ ಗರ್ವಾಲ್ ಗ್ರಾಮದಲ್ಲಿ ರಾವತ್ ಜನಿಸಿದ್ದರೂ, ಅವರ ಕುಟುಂಬಸ್ಥರು ಸೈನಾ ಗ್ರಾಮದಲ್ಲಿ ನೆಲೆಸುತ್ತಿದ್ದರು. ಹಾಗಾಗಿ ಸೈನಿ ಗ್ರಾಮದ ಜನ ದುಃಖಿತರಾಗಿದ್ದಾರೆ. ರಾವತ್ ಅವರು ಕೊನೆಯದಾಗಿ 2018ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದಾದ ನಂತರ ಹಲವು ಬಾರಿ ಗ್ರಾಮಕ್ಕೆ ತೆರಳಬೇಕು ಎಂದಿದ್ದರೂ ಆಗಿರಲಿಲ್ಲ. ಅಲ್ಲದೆ, ನಿವೃತ್ತಿ ಬಳಿಕ ಜನರಲ್ ಅವರು ಸೈನಿಯಲ್ಲಿಮನೆಯೊಂದನ್ನು ಕಟ್ಟಿಸಲು ಚಿಂತನೆ ನಡೆಸಿದ್ದರು.