ನವದೆಹಲಿ(ಆ.13): ಜೀವರಾಶಿಗಳ ಉಳಿವಿನ ಮೂಲವಾದ ನೀರಿನ ಕಣಗಳು ಚಂದ್ರನ ಮೇಲೆ ಇರುವುದನ್ನು ಇಸ್ರೋದ ಚಂದ್ರಯಾನ-2 ಮತ್ತೊಮ್ಮೆ ಖಚಿತಪಡಿಸಿದೆ. ಜೊತೆಗೆ ಚಂದ್ರನ ಮೇಲ್ಮೈನಲ್ಲಿ ಹೈಡ್ರೋಕ್ಸಿಲ್ ಕೂಡಾ ಇರುವುದನ್ನು ಇಸ್ರೋ ಖಚಿತಪಡಿಸಿದೆ. ಇಸ್ರೋದ ಚಂದ್ರಯಾನ-1 2008ರಲ್ಲೇ ಚಂದ್ರನ ಮೇಲೆ ನೀರಿನ ಕಣಗಳ ಇರುವಿಕೆಯ ಸುಳಿವು ನೀಡಿತ್ತು. ಇದೀಗ ಚಂದ್ರಯಾನ -2 ಅದನ್ನು ಮತ್ತಷ್ಟುಖಚಿತಪಡಿಸಿದೆ.