ರಾಜಧಾನಿ ಬೆಂಗಳೂರು ಸೇರಿ ರಾಜ್ಯದ 17 ಜಿಲ್ಲೆಗಳು ತೀವ್ರವಾದ ನೀರಿನ ತೊಂದರೆ ಅನುಭವಿಸಲಿವೆ ಎಂದು ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನೆ ಸಂಸ್ಥೆ ಎಚ್ಚರಿಕೆ ನೀಡಿದೆ. ಸಂಶೋಧಕರು ಜಿಲ್ಲಾ ಮಟ್ಟದ ಸರ್ಕಾರಿ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು, 20 ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ತಯಾರಿ ಮಾಡಿದ್ದಾರೆ. ಅಂತರ್ಜಲ ಲಭ್ಯತೆ, ಕಾಡು ಪ್ರದೇಶ, ಜನಸಾಂದ್ರತೆ, ದಿನ ಬಳಕೆಗೆ ನೀರಿನ ಬೇಡಿಕೆ, ಕೃಷಿ, ಜಾನುವಾರು ಹಾಗೂ ಕಾರ್ಖಾನೆ ಮುಂತಾದ ಅಂಶಗಳು ಹಾಗೂ ಸರಾಸರಿ