ಹೊಸದಿಲ್ಲಿ : ಪಟಾಕಿಗಳನ್ನು ನಿಷೇಧಿಸುವ ಮೂಲಕ ತಾನು ಯಾವುದೇ ನಿರ್ದಿಷ್ಟ ಗುಂಪು ಅಥವಾ ಸಮುದಾಯದ ವಿರುದ್ಧವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಸ್ಫಷ್ಟಪಡಿಸಿದೆಯಲ್ಲದೆ. ಖುಷಿ ಪಡುವ ನೆಪದಲ್ಲಿ ನಾಗರಿಕರ ಹಕ್ಕುಗಳ ಉಲ್ಲಂಘನೆಯನ್ನು ತಾನು ಅನುಮತಿಸುವ ಹಾಗಿಲ್ಲ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಆದೇಶ ಪೂರ್ಣವಾಗಿ ಜಾರಿಗೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಹಾಗೂ ಎ ಎಸ್ ಬೋಪಣ್ಣ ಅವರ ಪೀಠ ಹೇಳಿದೆ. ನೀವು ಜನರಿಗೆ ಖುಷಿ ನೀಡುತ್ತದೆ ಎಂದು