ಹೈದರಾಬಾದ್: ಮದುವೆ ಮುರಿಯಲು ಸಣ್ಣ ಮನಸ್ತಾಪಗಳೂ ಕಾರಣವಾಗುತ್ತದೆ ಎಂದು ಹಲವು ಬಾರಿ ನೋಡಿದ್ದೇವೆ. ಅಂತಹದ್ದೇ ವಿಚಿತ್ರ ಕಾರಣಕ್ಕೆ ತೆಲಂಗಾಣದಲ್ಲಿ ಮದುವೆಯೊಂದು ಮುರಿದು ಬಿದ್ದಿದೆ.ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲವೆಂದು ವರ ಮದುವೆಯನ್ನೇ ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣ ನಿಜಾಮಾಬಾದ್ ನಲ್ಲಿ ಇಂಥಹದ್ದೊಂದು ಘಟನೆ ನಡೆದಿದೆ.ವಧು-ವರ ಇಬ್ಬರೂ ಒಪ್ಪಿಯೇ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ ಮದುವೆಗೆ ಬಂದ ವರನ ಕಡೆಯವರು ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲವೆಂದು ಅಸಾಮಾಧನ ವ್ಯಕ್ತಪಡಿಸಿದ್ದರು. ಇದಾದ ಬಳಿಕ