ನಿನ್ನೆ ಪಶ್ಚಿಮ ಬಂಗಾಳದಲ್ಲಿ ನಡೆದ ಮೂರನೇ ಹಂತದ ಚುನಾವಣೆಯಲ್ಲಿ 68% ಮತದಾನವಾಗಿದೆ. ಹಲವೆಡೆ ಹಿಂಸಾಚಾರದ ವರದಿಯಾಗಿದ್ದು ಒಬ್ಬ ಮೃತನಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. 62 ಕ್ಷೇತ್ರಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಮೊದಲ 6 ತಾಸಿನಲ್ಲಿ 67ಪ್ರತಿಶತ ಮತದಾನವಾಗಿತ್ತು. ಚುನಾವಣಾ ಆಯೋಗ ಅಧಿಕಾರಿಗಳಿಗೆ ಹಿಂಸೆ, ಮತದಾರರಿಗೆ ಬೆದರಿಕೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಅಡ್ಡಿ ಸೇರಿದಂತೆ 1,500 ದೂರುಗಳು ಬಂದಿವೆ. ಘಟನೆಗೆ ಸಂಬಂಧಿಸಿದಂತೆ ಮಹಾನಗರಗಳಲ್ಲೇ ಕನಿಷ್ಠ 47 ಜನರು ಬಂಧನಕ್ಕೊಳಪಟ್ಟಿದ್ದಾರೆ.