ಮೂವರು ಹುಡುಗಿಯರ ಮೇಲೆ ಅಮಾನವೀಯ ಘಟನೆ ನಡೆದು ಹೋಗಿದೆ. ಒಬ್ಬ ಹುಡುಗಿಯ ಮುಖದ ಮೇಲೆ, ಇನ್ನಿಬ್ಬರು ಹುಡುಗಿಯರ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ಗಾಯಗೊಂಡಿದ್ದಾರೆ. ಸರಕಾರಿ ಆಸ್ಪತ್ರೆಗೆ ಗಾಯಾಳುಗಳಾಗಿರುವ ಮೂವರು ಸಹೋದರಿಯರನ್ನು ದಾಖಲಿಸಲಾಗಿದೆ. ಈ ಮೂವರೂ ಹುಡುಗಿಯರು ಸಹೋದರಿಯರಾಗಿದ್ದು, ಮಲಗಿದ್ದ ವೇಳೆ ಆ್ಯಸಿಡ್ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಉತ್ತರ ಪ್ರದೇಶದ ಗೊಂಡಾ ವ್ಯಾಪ್ತಿಯ ಪರಸಪುರದಲ್ಲಿ ಈ ದುರ್ಘಟನೆ ಸಂಭವಿಸಿದೆ.