ತಿರುವನಂತಪುರಂ : ಎಲ್ ನಿನೋ ಎಫೆಕ್ಟ್ ಕಾರಣ ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶ ನಾಲ್ಕು ದಿನ ವಿಳಂಬವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.ಜೂನ್ ಮೊದಲ ವಾರದಲ್ಲಿ ಕೇರಳ, ಕರ್ನಾಟಕವನ್ನು ಮುಂಗಾರು ಮಾರುತಗಳು ಪ್ರವೇಶ ಮಾಡಬಹುದು ಎಂದಿದೆ. ಈ ಮೊದಲು ಮೇ 27ಕ್ಕೆ ಮುಂಗಾರು ಮಾರುಗಳು ಕೇರಳ ಪ್ರವೇಶಿಸಬಹುದು ಎಂದು ಐಎಂಡಿ ತಿಳಿಸಿತ್ತು.ಈಗಾಗಲೇ ಅಂಡಮಾನ್ ದ್ವೀಪಗಳನ್ನು ತಲುಪಿರುವ ಮುಂಗಾರು ಮಾರುತಗಳು ಈಗ ಅರಬ್ಬಿ ಸಮುದ್ರದ ಕಡೆ ಚಲಿಸ್ತಿವೆ. ಮುಂಜಾಗ್ರತಾ ಕ್ರಮವಾಗಿ ಕೇರಳದ