Widgets Magazine

ಮನೆಗೆ ಮರಳುತ್ತಿದ್ದ ಇಬ್ಬರು ಯುವತಿಯರ ಮೇಲೆ ಆರು ಮಂದಿ ಪುರುಷರು ಹೀಗಾ ಮಾಡೋದು!

ತ್ರಿಪುರ| pavithra| Last Modified ಮಂಗಳವಾರ, 17 ನವೆಂಬರ್ 2020 (06:43 IST)
: ತಾಯಿಯನ್ನು ಭೇಟಿ ಮಾಡಿ ಮನೆಗೆ ಮರಳುತ್ತಿದ್ದ ಇಬ್ಬರು ಯುವತಿಯರ ಮೇಲೆ ಆರು ಮಂದಿ ಪುರುಷರು ಸಾಮೂಹಿಕವಾಗಿ ಮಾನಭಂಗ ಎಸಗಿದ ಘಟನೆ ಅಸ್ಸಾಂನ ಕರೀಮ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆಯರ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಕೆಯನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದ ಯುವತಿಯರು ರಾತ್ರಿ ಮನೆಗೆ ಮರಳಲು ಟ್ಯಾಕ್ಸಿ ಹತ್ತಿದ್ದಾರೆ. ಆ ವೇಳೆ ಚಾಲಕ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದ ತನ್ನ ಐವರು ಸ್ನೇಹಿತರ ಜೊತೆ ಸೇರಿ ಯುವತಿಯರ ಮೇಲೆ ಮಾನಭಂಗ ಎಸಗಿ ಅವರ ಬಳಿ ಇದ್ದ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಸಂತ್ರಸ್ತೆಯರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಒಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :