Widgets Magazine

ಅಲ್ಟ್ರಾಸೌಂಡ್ ಮಾಡಲು ಹೋದ ಗರ್ಭಿಣಿಗೆ ವೈದ್ಯ ಮಾಡಿದ್ದೇನು?

ಗ್ರೇಟರ್ ನೋಯ್ಡಾ| pavithra| Last Modified ಶನಿವಾರ, 28 ನವೆಂಬರ್ 2020 (09:24 IST)
ಗ್ರೇಟರ್ ನೋಯ್ಡಾ : ಅಲ್ಟ್ರಾಸೌಂಡ್ ಮಾಡಲು ಹೋದ 26 ವರ್ಷದ ಗರ್ಭಿಣಿಯೊಬ್ಬಳಿಗೆ ವೈದ್ಯರು ಲೈಂಗಿಕ ಕಿರುಕುಳ ನೀಡಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದ ದಾದ್ರಿ ಪ್ರದೇಶದ ವಿದ್ಯಾ ಅಲ್ಟ್ರಾಸೌಂಡ್ ಕೇಂದ್ರದಲ್ಲಿ ನಡೆದಿದೆ.

ರಾಜ್ಬೀರ್ ಇಂತಹ ಕೃತ್ಯ ಎಸಗಿದ ವೈದ್ಯ. ಈತ ಅಲ್ಟ್ರಾಸೌಂಡ್ ಮಾಡುವ ವೇಳೆ ಗರ್ಭಿಣಿಯ ಬಟ್ಟೆ ಬದಲಾಯಿಸಿದ್ದಾರೆ. ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಆ ವೇಳೆ ವೈದ್ಯರು ಮದ್ಯ ಸೇವಿಸಿದ್ದರು ಎಂದು ಗರ್ಭಿಣಿ ಆರೋಪಿಸಿದ್ದಾಳೆ.

ಈ ಬಗ್ಗೆ ಗರ್ಭಿಣಿ ವೈದ್ಯರ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :