ಬರೇಲಿ : ಜುಲೈನಲ್ಲಿ 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಮರಕ್ಕೆ ನೇಣು ಹಾಕಿದ 26 ವರ್ಷದ ಆರೋಪಿಯನ್ನು ಸಂತ್ರಸ್ತ ಬಾಲಕನ ಮನೆಯವರು ಕೊಲೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಮೃತ ಬಾಲಕನ ಮನೆಗೆ ಬಂದಿದ್ದ ಆರೋಪಿ ಬಾಲಕನ ಜೊತೆ ಆಟವಾಡುತ್ತಿದ್ದಾಗ ಆತನನ್ನು ಅಪಹರಿಸಿದ್ದಾನೆ. ಬಳಿಕ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಮರಕ್ಕೆ ನೇಣು ಹಾಕಿ ಪರಾರಿಯಾಗಿದ್ದಾನೆ. ಮನೆಯವರು ಬಾಲಕನ ದೇಹ ಮರದ