ನವದೆಹಲಿ : ಆ್ಯಪ್ ನಲ್ಲಿ ಪರಿಚಯನಾದ ಯುವಕನನ್ನು ಮಜಾ ಮಾಡಲು ಕರೆದು ಕೊಲೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಸನ್ನಿ ದಯಾಲ್ (25) ಮೃತಪಟ್ಟ ಯುವಕ, ಸುಮಿತ್ ಡಬ್ಬಾ(20), ಕಾರ್ತಿಕ್ (24) ಕೊಲೆ ಮಾಡಿದ ಆರೋಪಿಗಳು. ಸುಮಿತ್ ಗೇ ಆ್ಯಪ್ ಮೂಲಕ ಸನ್ನಿಯನ್ನು ಪರಿಚಯ ಮಾಡಿಕೊಂಡು ವಿಹಾರ್ ಪ್ರದೇಶದಲ್ಲಿರುವ ನಿರ್ಜನ ಕಾಡಿನೊಳಗೆ ಭೇಟಿಯಾಗಿ ರೊಮ್ಯಾನ್ಸ್ ಮಾಡೋಣ ಎಂದು ಕರೆದು ಬಳಿಕ ಅಲ್ಲಿಗೆ ಬಂದ ಆತನ ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದಾರೆ,