ಜೋಧ್ ಪುರ : ಮೊಬೈಲ್ ನೆಟ್ ಖಾಲಿ ಮಾಡಿದ್ದಕ್ಕಾಗಿ 23 ವರ್ಷದ ಯುವಕ ತನ್ನ ಕಿರಿಯ ಸಹೋದರನನ್ನು ಚಾಕುವಿನಿಂದ ಇರಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಸಹೋದರನ ಮೊಬೈಲ್ ನಲ್ಲಿರುವ ಇಂಟರ್ ನೆಟ್ ಡೇಟಾವನ್ನು ಕಿರಿಯ ಸಹೋದರ ಬಳಸಿದ್ದ ಕಾರಣ ಅದು ಖಾಲಿಯಾಗಿದೆ. ಇದನ್ನು ತಿಳಿದ ಯುವಕ ಕೋಪಗೊಂಡು ಆತನನ್ನು ಮನೆಯ ಮಹಡಿಯ ಮೇಲೆ ಕರೆದುಕೊಂಡು ಹೋಗಿ ಗದರಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳ ನಡೆದು ಕೋಪಗೊಂಡ ಯುವಕ ಸಹೋದರನ ಎದೆಗೆ