Widgets Magazine

ಪತಿ ಡ್ಯುಟಿಯಲ್ಲಿರುವಾಗ ಆತನ ಸಹದ್ಯೋಗಿ ಮನೆಗೆ ಬಂದು ಮಾಡಿದ್ದೇನು ಗೊತ್ತಾ?

ಪುಣೆ| pavithra| Last Modified ಶುಕ್ರವಾರ, 6 ನವೆಂಬರ್ 2020 (09:21 IST)
ಪುಣೆ : ವ್ಯಕ್ತಿಯೊಬ್ಬ ತನ್ನ ಸಹದ್ಯೋಗಿಯ ಮಾನಸಿಕ ಅಸ್ವಸ್ಥ ಪತ್ನಿಯ ಮೇಲೆ ಎರಡು ವಾರಗಳ ಕಾಲ ಮಾನಭಂಗ ಎಸಗಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಸಂತ್ರಸ್ತೆಯ ಪತಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಆತನ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಂತ್ರಸ್ತೆಯ ಪತಿ ಡ್ಯುಟಿಯಲ್ಲಿದ್ದ ಸಂದರ್ಭದಲ್ಲಿ ಆತನ ಪತ್ನಿಯ ಮೇಲೆ ಮಾನಭಂಗ ಎಸಗುತ್ತಿದ್ದ. ಅಷ್ಟೇ ಅಲ್ಲದೇ ಈ ವಿಚಾರ ಯಾರಿಗಾದರೂ ತಿಳಿಸಿದರೆ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಆದರೂ ಮಹಿಳೆ ಈ ಬಗ್ಗೆ ಪತಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆರೋಪಿ ವಿರುದ್ಧ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :