ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕನಿಗ ತಂದೆ ಮಾಡಿದ್ದೇನು ಗೊತ್ತಾ?

ಸೂರತ್| pavithra| Last Modified ಸೋಮವಾರ, 23 ನವೆಂಬರ್ 2020 (07:40 IST)
ಸೂರತ್ : ವ್ಯಕ್ತಿಯೊಬ್ಬ 5 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 19 ವರ್ಷದ ಯುವಕನ ಖಾಸಗಿ ಭಾಗಕ್ಕೆ ಒದ್ದು ಕೊಲೆ ಮಾಡಿದ ಘಟನೆ ಗುಜರಾತ್ ನ ಭರೂಚ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ಚಾಕಲೇಟ್ ನೀಡುವ ಆಮಿಷಯೊಡ್ಡಿ ಯುವಕ ಅವಳನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ಅಳುತ್ತಾ ಹೊರಗೆ ಬಂದ ಶೌಚಾಲಯದಿಂದ ಯುವಕ  ಬರುತ್ತಿರುವುದನ್ನು ನೋಡಿದ ಯುವಕನ ತಾಯಿ ವಿಷಯ ತಿಳಿದು ಬಾಲಕಿಯ ತಂದೆಯ ಬಳಿ ತಿಳಿಸುತ್ತಾಳೆ. ಇದರಿಂದ ಕೋಪಗೊಂಡ ತಂದೆ  ಯುವಕನ ಖಾಸಗಿ ಭಾಗಕ್ಕೆ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಈ ಬಗ್ಗೆ ಭರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :