ಕಾನ್ಪುರ : ಮದುವೆಯಾಗುವ ನೆಪದಲ್ಲಿ ವಕೀಲನೊಬ್ಬ ಮಹಿಳೆಯ ಶೀಲಕೆಡಿಸಿದ ಹಿನ್ನಲೆಯಲ್ಲಿ ಸಂತ್ರಸ್ತ ಮಹಿಳೆ ಮರ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ ನಡೆದಿದೆ. ಮಹಿಳೆ ತನ್ನ ಪತಿ ಹಾಗೂ ಅಳಿಯಂದಿರ ವಿರುದ್ಧ ದಾಖಲಿಸಿದ್ದ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನು ಆರೋಪಿ ವಕೀಲ ನಿರ್ವಹಿಸುತ್ತಿದ್ದನು. ಆ ವೇಳೆ ಆತ ಮಹಿಳೆಗೆ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಅಸಮಾಧಾನಗೊಡ