ಹರಿಯಾಣ: ವಿವಾಹಿತನೊಬ್ಬ 19 ವರ್ಷದ ಹುಡುಗಿಗೆ ಮದುವೆಯಾಗುವ ನೆಪಯೊಡ್ಡಿ ಆಕೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗೆ ಮದುವೆಯಾಗಿ 6 ವರ್ಷದ ಮಗನಿದ್ದಾನೆ. ಈ ನಡುವೆ ಆತ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅವಳನ್ನು ಕರೆದುಕೊಂಡು ಹೋಗಿ ಬಾಡಿಗೆ ಮನೆಯೊಂದರಲ್ಲಿ ಕೂಡಿಹಾಕಿ ಹಲವು ಬಾರಿ ಮಾನಭಂಗ ಎಸಗಿದ್ದಾನೆ.ಮಗಳನ್ನು ಆರೋಪಿ ಅಪಹರಿಸಿರುವುದಾಗಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದ