ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಮಹಿಳೆಯ ನಂಬರ್ ಬರೆದ ಕಾಮುಕ ಮಾಡಿದ್ದೇನು?

ಬೆಂಗಳೂರು| pavithra| Last Modified ಶುಕ್ರವಾರ, 25 ಡಿಸೆಂಬರ್ 2020 (07:28 IST)
ಬೆಂಗಳೂರು : 33 ವರ್ಷದ ಶಿಕ್ಷಕನೊಬ್ಬ ಸಾರ್ವಜನಿಕ ಶೌಚಾಲಯದ ಗೋಡೆಗಳ ಮೇಲೆ 32 ವರ್ಷದ ಮಹಿಳಾ ಕಾನ್ ಸ್ಟೇಬಲ್ ಒಬ್ಬರ ಹೆಸರು ಮತ್ತು ಮೊಬೈಲ್ ನಂಬರ್ ಬರೆದು ಲೈಂಗಿಕ ನೆರವು ನೀಡುವುದಾಗಿ ತಿಳಿಸಿದ್ದಾನೆ.

ಆರೋಪಿ ಶಿಕ್ಷಕ ಹಾಗೂ ಮಹಿಳೆ ಸಹಪಾಠಿಗಳಾಗಿದ್ದು, ವಾಟ್ಸಾಪ್ ಗ್ರೂಪನಲ್ಲಿ ಸದಸ್ಯರಾಗಿದ್ದರು. ಆದರೆ ಮಹಿಳೆ  ಆರೋಪಿಯ ಕರೆ ಮತ್ತು ಮೆಸೇಜ್ ನ್ನು ನಿರ್ಲಕ್ಷಿಸಿದ ಕಾರಣ ಕೋಪಗೊಂಡ ಆತ ಇಂತಹ ನೀಚ ಕೃತ್ಯ ಎಸಗಿದ್ದಾನೆ.  ಈ ಹಿನ್ನಲೆಯಲ್ಲಿ ಮಹಿಳಾ ಕಾನ್ ಸ್ಟೇಬಲ್ ಗೆ ಹಲವು ಪುರುಷರು ಲೈಂಗಿಕ ಸಂಬಂಧ ಹೊಂದುವಂತೆ ಕರೆ ಮಾಡಿದ್ದಾರೆ.

ಇದರಿಂಬ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ.ಇದರಲ್ಲಿ ಇನ್ನಷ್ಟು ಓದಿ :