ಲಕ್ನೋ : ಸಮಾಜದಲ್ಲಿ ತಮ್ಮ ಗೌರವ ಉಳಿಸಿಕೊಳ್ಳಲು ಗರ್ಭಿಣಿಯಾದ ಅವಿವಾಹಿತ ಮಗಳನ್ನು ಆಕೆಯ ಪೋಷಕರೇ ಕೊಲೆ ಮಾಡಿ ರೈಲ್ವೆ ಹಳಿಗಳ ಮೇಲೆ ಎಸೆದ ಘಟನೆ ಉತ್ತರಪ್ರದೇಶದ ಪ್ರತಾಪಗಢ ದಲ್ಲಿ ನಡೆದಿದೆ. ಯುವತಿಯ ಮೃತದೇಹ ರೈಲ್ವೆ ಹಳಿಗಳ ಮೇಲೆ ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಪೋಷಕರಿಗೆ ತಿಳಿಸಿದ ಬಳಿಕ ಅವರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಆಮೇಲೆ ಪೊಲೀಸರು ಪೋಷಕರ ಮೇಲೆ