ಕಾನ್ಪುರ : ನಿವೃತ್ತ ಸೇನಾ ಅಧಿಕಾರಿಯೊಬ್ಬರು ತಮ್ಮ 80 ವರ್ಷದ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಸೀರ್ ಪುರದ ಗ್ರಾಮವೊಂದರಲ್ಲಿ ನಡೆದಿದೆ. ಅಶೋಕ್ ಕಟಿಹಾರ್ ಕೊಲೆ ಮಾಡಿದ ನಿವೃತ್ತ ಸೇನಾ ಅಧಿಕಾರಿ, ಲಾಲಾ ರಾಮ್ ಕೊಲೆಯಾದ ತಂದೆ. ಮದ್ಯಪಾನ ವ್ಯಸನಿಯಾಗಿದ್ದ ಅಶೋಕ್ ಟಿವಿ ನೋಡುತ್ತಿದ್ದ ತಂದೆಗೆ ಟಿವಿ ಆಫ್ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ತಂದೆ ಅವನ ಮಾತನ್ನು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಗ ಪರವಾನಗಿ ಪಡೆದ ಡಬಲ್ ಬ್ಯಾರೆಲ್