ನಾಗ್ಪುರ: 15 ವರ್ಷದ ಹುಡುಗನೊಬ್ಬ ತನ್ನ ತಾಯಿಯ ಪ್ರೇಮಿಯನ್ನು ತನ್ನ ಸ್ನೇಹಿತರ ಸಹಾಯದಿಂದ ಅಪಹರಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಆರೋಪಿ ಹುಡುಗನ ತಾಯಿ ಸಂತ್ರಸ್ತನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದರಿಂದ ಆತನ ತಾಯಿ ಮತ್ತು ತಂದೆಯ ನಡುವೆ ಜಗಳವಾಗುತ್ತಿತ್ತು. ಇದರಿಂದ ಕೋಪಗೊಂಡ ಆರೋಪಿ ಹುಡುಗ ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಸಂತ್ರಸ್ತನನ್ನು ಬೈಕ್ ನಲ್ಲಿ ಅಪಹರಿಸಿದ್ದಾರೆ. ಆ ವೇಳೆ ಪೊಲೀಸರು ತಿರುಗಾಡುತ್ತಿರುವುದನ್ನು ನೋಡಿದ ಸಂತ್ರಸ್ತ ಅವರಿಂದ